Tuesday, May 24, 2011

ನಾನು ಸತ್ತ ಮೇಲಾದ್ರು ನಿಂಗೆ ಬುದ್ದಿ ಬರಲಿ


ನಾನು ಸತ್ತ ಮೇಲಾದ್ರು ನಿಂಗೆ ಬುದ್ದಿ ಬರಲಿ

ಬಹಳಷ್ಟು ಜನ ನಂಗೆ ಮೇಲ್ ಮತ್ತು ಮೆಸೇಜ್ ಮಾಡಿ ಕೇಳ್ತಾ ಇದ್ರು ಯಾಕೆ ಇತ್ತೀಚಿಗೆ ಲವ್ ಸ್ಟೋರಿಗಳನ್ನು ಬರಿಯೋದನ್ನು ನಿಲ್ಲಿಸಿ ಬಿಟ್ಟಿದ್ದೀರಿ ಅಂತ. ಕೇಳಿದವರಲ್ಲಿ ಹುಡುಗರು ಇದ್ದರು ಹುಡಿಗಿಯರು ಇದ್ದರು. ನನ್ನ ಎಲ್ಲ ಲವ್ ಸ್ಟೋರಿಗಳಲ್ಲಿ ಹುಡಿಗೀರು ನಂಗೆ ಕೈ ಕೊಡುತ್ತಿದ್ದರಿಂದ ಎಲ್ಲರು ನಂಗೆ ಲವ್ failur ಆಗಿದೆ ಅಂತಾನೆ ತಿಳಿದಿದ್ದರು. ನಂಗೆ ಲವ್ failur ಅಂತ ಆಗಿಲ್ಲವಾದರೂ ಇಷ್ಟ ಪಟ್ಟ ಹುಡಿಗಿ ಸಿಗಲಿಲ್ಲ ಅನ್ನೋ ಸಣ್ಣ ನೋವು ಆಗಾಗ್ಗೆ ಕಾಡೋದು ನಿಜ. ಅದು ಲವ್ ಅನ್ನೋದಕಿಂತ ಜಸ್ಟ್ aaadaaaಕ್ರುಶ್. ಬರಿ ಲವ್ failur ನೆ ಯಾಕೆ ಬರಿತಿದ್ದೆ ಅಂದರೆ ನನ್ನ ಸುತ್ತ ಮುತ್ತ ಸಾವಿರಾರು ಜನ ತಮ್ಮ ಪ್ರೀತಿ ಕಳೆದುಕೊಂಡು ಜೀವನವೇ ಬರಿದಾಗಿಸಿಕೊಂದಿದ್ದಾರೆ, ಎಷ್ಟೋ ಸ್ನೇಹಿತರು ಸಾವಿನ ಕಡೆ ಮುಖ ಮಾಡಿದ್ದಾರೆ. ಅವರೆಲ್ಲರ ನೋವನ್ನು ಯಾರು ಶಮನ ಮಾಡಲು ಸಾಧ್ಯವಿಲ್ಲದಿದ್ದರೂ ನಿಮ್ಮೊಂದಿಗೆ ನಿಮ್ಮಂತೆ ನಿಮ್ಮಷ್ಟೇ ನೋವು ಅನುಭವಿಸುವ ನಾನು ಒಬ್ಬ ಇದ್ದೀನಿ ಎಂದು ನನ್ನ ಕಥೆ ಹೇಳುವ ಮೂಲಕ ಸ್ವಲ್ಪನಾದರು ಅವರನ್ನು ಸಮದಾನಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಕಥೆಗಳಿಂದ ಒಂದು ಹೃದಯದ ನೋವು ಕಡಿಮೆ ಆಗಿ, ಕಳೆದುಕೊಂಡ ಪ್ರೀತಿನ ಮರೆತು ಹೊಸ ಜೀವನಕ್ಕೆ ಕಾಲಿರಿಸಿದರೆ ನನ್ನ effort ಸಾರ್ತಕ ಆದಂತೆ. ಆದರು ಇಷ್ಟು ದಿನ ಯಾಕೋ ನಂಗೆ ಬರಿ ಬೇಕು ಅಂತ ಅನ್ನಿಸಲೇ ಇಲ್ಲ. ಆದ್ರೆ ಇವತ್ತು ಒಂದು ವಿಚಿತ್ರವಾದ ಘಟನೆಯನ್ನು ನೋಡಿ ಏನಾದ್ರು ಬರಿಲೆ ಬೇಕು ಅಂತ ಅನ್ನಿಸಿತು.
ಪ್ರೀತಿ ಗುರಿ ಮುಟ್ಟಿಸುವ ಬಿಲ್ಲಾಗಬೇಕೆ ಹೊರತು ಜೀವ ತೆಗೆಯುವ ಚೂರಿ ಆಗಬಾರದು. ಮಂಡ್ಯದ ಗೆಳೆಯ ದೀಪಕ್ ಗೆ ಪ್ರೀತಿ ಬರಿ ಚೂರಿಯಾಗಿರದೆ ಜಾತಿಯ ವಿಷ ಲೇಪಿತ ಖಡ್ಗವಾಗಿ ಸಾವಿನ ಕುಣಿಕೆಗೆ ಕೊರಳೋಡ್ಡುವಂತೆ ಮಾಡಿದ್ದು ಮಾತ್ರ ವಿಧಿಯ ವಿಪರ್ಯಾಸ. ದಿನದ ಕೆಲಸ ಮುಗಿಸಿ ಬೆಂಗಳೂರಿನ ಇಳಿ ಸಂಜೆ ಮಳೆಯಲ್ಲಿ ತೋಯ್ದು ಮನೆ ಸೇರಿ ಟಿವಿ ಆನ್ ಮಾಡಿ TV -9 ನಲ್ಲಿ 'ಜಾತಿ ಕೊಂದ ಪ್ರೀತಿ' ಕಾರ್ಯಕ್ರಮ ನೋಡಿ ಒಂದು ಕ್ಷಣ ಖಿನ್ನನಾದೆ. ಕೇವಲ 24 ವಯಸ್ಸಿನ ಸ್ಪುರದ್ರೂಪಿ ಯುವಕ ತನ್ನ ಪ್ರೇಯಸಿ ಜಾತಿಯನ್ನು ಅಡ್ಡ ಇಟ್ಟು ಮದುವೆ ಆಗಲು ಒಪ್ಪಿಲ್ಲ ಅಂತ ನೇಣು ಬಿಗಿದುಕೊಂಡು ಜೀವ ತೆತ್ತಿದ್ದಾನೆ ಇವತ್ತು. ಇಲ್ಲಿ ಆ ಹುಡಿಗಿಯದ್ದು ತಪ್ಪೋ, perents ದು ತಪ್ಪೋ ಜಾತಿಯ ಬೇರಿನ ಮೇಲೆ ಮರದಂತೆ ಬೆಳೆದಿರೋ ನಮ್ಮ ಸಮಾಜದ ತಪ್ಪೋ ಅನ್ನೋದನ್ನು ವಿಶ್ಲೇಷಣೆ ಮಾಡೋದುಕಿಂತ ವಿನ ಕಾರಣ ನಿನ್ನ ಜೀವ ಕಳೆದುಕೊಂಡೆಯಲ್ಲ ಅನ್ನೋದೇ ವಿಪರ್ಯಾಸದ ಸಂಗತಿ. ಗೆಳಯ ನೀನು ಬರೆದಿಟ್ಟ death ನೋಟ್ ಗಿಂತ ನಿನ್ನ ಅಪ್ಪ, ಅಮ್ಮ, ಅಜ್ಜಿಯ ರೋದನ ಕರಳು ಹಿಂಡುವಂತೆ ಇತ್ತು. 'ಕಷ್ಟ ಪಟ್ಟು ಹೆತ್ತು ಹೊತ್ತು ಬೆಳಸಿ ಸಾಲ ಸೋಲ ಮಾಡಿ ಮಗನನ್ನು ಓದಿಸಿ ಅವನ ಜೀವನ ಸುಂದರ ಹೂತೋಟ ದಲ್ಲಿ ಹರಳುವ ಮಲ್ಲಿಗೆ ಹೂವಾಗಿ ಅರಳಿ ಮುಪ್ಪಿನ ಕಾಲದಲ್ಲಿ ಆಸರೆಯಾಗುತ್ತಾನೆ ಅಂದುಕೊಂಡಿದ್ದರೆ ಈತ ಇಷ್ಟ ಪಟ್ಟ ಹುಡಿಗಿ ಮೋಸ ಮಾಡಿದಲೆಂದು ನಮಗೆ ಮೋಸ ಮಾಡಿ ಬರಲಾರದ ಲೋಕಕ್ಕೆ ಹೋದರೆ ಹೇಗೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಆ ಶಿಕ್ಷೆ ತಪ್ಪಿತಸ್ತರನ್ನು ಸರಿ ದಾರಿಗೆ ತರಿಸುವಂತಿರಬೇಕು, ಆದರೆ ಅವಳು ಮಾಡಿದ ತಪ್ಪಿಗೆ ಇರುವ ಒಬ್ಬ ಮಗ ನೀನು ಬಲಿಯಾಗಿ ನಮ್ಮ ಜೀವನವನ್ನೇ ಕತ್ತಲು ಮಾಡಿದೆಯಲ್ಲ ಇದು ಯಾವ ನ್ಯಾಯ' ಎಂದು ಬಿಕ್ಕಿದ ತಂದೆಯ ನೋವು ಎಂತಾದ್ದು ಅನ್ನೋದು ಆ ದೇವರಿಗೆ ಅರ್ಥವಾಗಬೇಕು. ದೋಸ್ತ, ಕೈಯ ಕಿರು ಬೆರಳಿನ ಉಗುರು ಎದ್ದು ಹೂ ಕೀಳುವಾಗ ಗಿಡಕ್ಕೆ ತಾಗಿದರೆ ಅಮ್ಮ ಅಂತ ಕೂಗುವ ನೀನು, ಕುಣಿಕೆಯ ಅಗ್ಗ ನಿನ್ನ ಕುತ್ತಿಗೆಗೆ ಬಿಗಿದು ಆ ಅಗ್ಗ ಹಿಡಿ ಹಿಡಿಯಾಗಿ ನಿನ್ನ ರಕ್ತವನ್ನು ಕೀಚುತ್ತಿರುವಾಗ ಅಮ್ಮ ಅನ್ನುವ ಒಂದು ಶಬ್ದ ಬರಲಿಲ್ಲವೇ? ಅಮ್ಮನ ಆ ಪ್ರೀತಿ ನೆನಪಾಗಲಿಲ್ಲವೇ. ತಂದೆ ತಾಯಿಯ ವರುಷಾನು ವರುಷದ ನಿಷ್ಕಳಂಕದ ಪ್ರೀತಿಗಿಂತ ಮೊನ್ನೆ ಮೊನ್ನೆ ಬಂದ ಮೋಸ ಮಾಡುವ ಹುಡಿಗಿಯ ಪ್ರೀತಿಯೇ ದೊಡ್ದದಾಯಿತೆ? ಸಿಗುವ ಒಂದು ಜೀವನವನ್ನೇ ತಿಂದು ಹಾಕುವ ಆ ಪ್ರೀತಿ ಬೇಕಾ? TCS ನಂತ ಪ್ರತಿಷ್ಟಿತ ಕಂಪನಿಯಲ್ಲಿ ಕೆಲಸ ಮಾಡುತಿದ್ದ ನೀನು, ನಿನ್ನ ಪ್ರೀತಿಸುತ್ತಿದ್ದ ಒಂದು ಹೃದಯದ ದನಿಗಾಗಿ ಹಾತೊರಿಯುತಿದ್ದರೆ, ನಿನ್ನ ಪ್ರೀತಿಸುವ ಹತ್ತು ಹೃದಯದ ಕೂಗು ಕೇಳಲಿಲ್ಲವೇ ನಿನಗೆ. ಯಾರಿಗೆ ಬುದ್ದಿ ಕಲಿಸಲು ಈ ಶಿಕ್ಷೆ? ಕಣ್ಣಲ್ಲಿ ದೂಳು ಬಿದ್ದಾಗ ಕಣ್ಣಂಚಿನಿಂದ ಹೊರ ಬೀಳುವ ಕಣ್ಣೀರು ನೇರ ಕೆಳಗೆ ಬೀಳದೆ ಕೆನ್ನೆ ಸವರಿ ಬೀಳುತ್ತದೆ.ನಿನ್ನ ಮನದಲ್ಲಿ ಮೋಸದ ದೂಳು ಬಿದ್ದಾಗ ನಿನ್ನ ಜೀವ ನಿನ್ನ ತಂದೆ ತಾಯಿಯನ್ನು ನೆನೆಯಲೇ ಇಲ್ಲವಲ್ಲ ಗೆಳೆಯ.
ನಮ್ಮಲ್ಲಿ ಎಷ್ಟೋ ಜನರಿಗೆ ಆ ದೇವರು ಕಣ್ಣು ಕೊಟ್ಟಿಲ್ಲ, ಕಾಲು ಕೊಟ್ಟಿಲ್ಲ, ಕೈ ಕೊಟ್ಟಿಲ್ಲ, ಎಲ್ಲ ಕೊಟ್ಟು ದಿನವು ಸಾಯುವ ಬದುಕನ್ನು ಕೊಟ್ಟಿದ್ದರೂ ಅವರೆಲ್ಲ ಎದೆಗುಂದದೆ ಜೀವನ ನಡೆಸುತಿದ್ದಾರೆ, ಎಲ್ಲ ಇದ್ದು ಯೋಚನೆ ಮಾಡಲು ಯೋಗ್ಯವಲ್ಲದ ಹುಚ್ಚು ಪ್ರೀತಿಗಾಗಿ ಸಾಯಿಯುದು ಹೇಡಿತನ ಅಲ್ಲವೇ. ನಿನಗೆ ಸಾವೇ ಎಲ್ಲಕ್ಕಿಂತ ಮುಕ್ಯ ಆನಿಸಿದ್ದರೆ ಒಮ್ಮೆ ಸರಕಾರೀ ಆಸ್ಪೆತ್ರೆಗೆ ಹೋಗಿ ಬರಬೇಕಿತ್ತು, ಸಿಗಲಾರದ ಜೀವಕೊಸ್ಕರ ಹೋರಾಡುವ ನೂರಾರು ಜನರ ಆರ್ಥ ನಾದ, ಸಿಕ್ಕ ನಿನ್ನ ಸುಂದರ ಜೀವವನ್ನು ಕಂಡಿತ ಉಳಿಸುತ್ತಿತ್ತು ದೋಸ್ತ. ಮನಸ್ಸು ಬಾರವಾಗಿ ಜೀವನ ಸಾಕು ಅನ್ನಿಸಿದಾಗ ಯಾವುದೊ ಅನಾಥಾಲಯಕ್ಕೆ ಹೋಗಿದ್ದಾರೆ ನಿನ್ನ ಹಣೆ ಬರಹವೇ ಬದಲಾಗುತಿತ್ತು. ಒಮ್ಮೆ ಯಾರೋ ಹೇಳಿದರು 'Nick Vujicic (http://www.attitudeisaltitude.com/)' ನ ಬಗ್ಗೆ. ಯಾವುದೋ ಸಣ್ಣ ವಿಷಯಕ್ಕೆ ಆಕಾಶವೇ ತಲೆ ಮೇಲೆ ಬಿದ್ದವರಂತೆ ಮನಸಿನ ಸ್ತಿಮಿತ ಕಳೆದು ಕೊಂಡಿದ್ದ ನನಗೆ ಕೈ ಅಷ್ಟೇ ಅಲ್ಲ ಎರಡು ಕಾಳುಗಲಿಲ್ಲದಿದ್ದರೂ ಆತನ ನಗು, ಜೀವನವನ್ನು ಪ್ರೀತಿಸಿವ ರೀತಿ ನೋಡಿ ಒಮ್ಮೆ ಅತ್ತು ಬಿಟ್ಟೆ. ಜೀವನ ಬರಿ ದೊಡ್ಡದಲ್ಲ ಗೆಳೆಯ ಆಳವಾಗಿದೆ.

ಸ್ನೇಹಿತರೆ ಹುಟ್ಟು ಸಾವು ತಾವಾಗೆ ಬರಬೇಕು, ಅದೆಂತ ಕಷ್ಟ ಬಂದರು ದಯವಿಟ್ಟು ಸಾವಿನ ಯೋಚನೆ ಮಾಡಬೇಡಿ. ಅಪ್ಪಿ ತಪ್ಪಿ ಏನಾದರೂ ನಿಮ್ಮ ತಲೆಯಲ್ಲಿ ಸಾವಿನ ಬಗ್ಗೆ ಯೋಚನೆ ಬಂದರೆ ಮೇಲೆ ಹೇಳಿದ ಒಂದು ಕೆಲಸ ಮಾಡಿದರೆ ಸಾಕು. ನಿಮ್ಮ ಮನಸ್ಸು ಕಂಡಿತ ಬದಲಾಗುತ್ತದೆ. Anyway Deepak ಅಲ್ಲಿಯಾದರು ನಿನ್ನ ಆತ್ಮ ಶಾಂತಿಯಿಂದರಲಿ.

Regards,
Rajashekara Gouda Hotur
rjgouda@gmail.com

Saturday, April 23, 2011

ಪ್ರಾರಂಭವಾಗಿದೆ ಪ್ರಳಯ, ಇನ್ನು 591 ದಿನಗಳು ಮಾತ್ರ!!!!!


ಬೇಸಿಗೆಯಲ್ಲಿ ಮಳೆ, ಮಳೆಗಾಲದಲ್ಲಿ ಬಿರು ಬಿಸಿಲು. ಇದೇನು ಕಾಲ, ತನ್ನ ಕಾಲವನ್ನು ಬದಲಿಸುತ್ತಿದೆಯೇ? ಇಲ್ಲ ಜಗದ ಜೀವ ಸಂಕುಲನವನ್ನು ನಿಧಾನವಾಗಿ ನಾಶ ಮಾಡುತ್ತಿದೆ. ಇದಕ್ಕೆ ನಾವ್ಯಾರು ಪ್ರಕೃತಿಯನ್ನು ಬಯ್ಯಬೇಕಿಲ್ಲ ಯಾಕಂದ್ರೆ ಮಾಡಿದ್ದುಣ್ಣೋ ಮಹರಾಯ. ನಾವು ಪ್ರಕೃತಿಯನ್ನು ನಾಶ ಮಾಡ್ತಾ ಇದ್ದೀವಿ ಪ್ರಕೃತಿ ನಮ್ಮನ್ನು ನಾಶ ಮಾಡುತ್ತಿದೆ. ಏಟಿಗೆ ಎದಿರೇಟು. ಮನುಷ್ಯ ಎಷ್ಟೊಂದು ಮುಂದುವರಿತಿದ್ದಾನೋ ಅಷ್ಟೇ ತನ್ನ ಬುಡಕ್ಕೆ ತಾನೇ ಕೊಡಲಿ ಏಟು ಕೊಟ್ಟು ಕೊಳ್ಳುತ್ತಿದ್ದಾನೆ. ಹಾಗೆ ಸುಮ್ಮನೆ ನೆನೆಸಿಕೊಳ್ಳಿ ನೀವು ನಿಮ್ಮ ಮುದ್ದಿನ ಹೆಂಡತಿ, cute ಮಗಳು ಪಾರ್ಕ್ ನಲ್ಲಿ ಆಟವಡ್ತಾ ಇದ್ದೀರಿ. ಮೋಡ ಚದುರಿ ಸೂರ್ಯನನ್ನು ಮರೆಮಾಡಿತ್ತು. ವಿಶಾಲವಾಗಿ ಚಾಚಿದ್ದ ಆಲದ ಮರ ಮೆಲ್ಲಗೆ ತಲೆ ಆಡಿಸುತ್ತ ತಂಗಾಳಿ ಬೀಸುತಿತ್ತು. ನೀವು ನಿಮ್ಮ ಹೆಂಡತಿ ಮಡಿಲಲ್ಲಿ ತಲೆಯಿಟ್ಟು ಭವಿಷ್ಯದ ಕನಸು ಕಾಣುತಿದ್ದರೆ ಭವಿಷ್ಯವೇ ತಿಳಿಯದ ಮಗು ನಿಮ್ಮ ಎದೆ ಮೇಲೆ ಕುಳಿತು ಆಕಾಶಕ್ಕೆ ಮುತ್ತು ಕೊಡುತ್ತಿತ್ತು. ನಿಮ್ಮಿಬ್ಬರ ಈ ಕಾಣುವ ಮತ್ತು ಕಾಣದ ಆಟ ನೋಡುತ್ತಾ ಆನಂದದಲ್ಲಿ ಮಿಂದಿದ್ದಳು ನಿಮ್ಮ ಮಡದಿ. ತಂಗಾಳಿ ಸ್ವಲ್ಪ ಬಿರುಸಾಗಿ ಮೋಡ ಕರಗಿ ಹನಿ ಬೀಳಲಾರಂಬಿಸಿತು. ಹನಿ ಜೋರಾಗಿ ಜೊತೆಗೆ ಆಣಿಕಲ್ಲು ಬೀಳಲಾರಂಬಿಸಿತು. ನೋಡುತ್ತಾ ನೋಡುತ್ತಾ ಬಿರುಗಾಳಿ ಮತ್ತು ಮುಷ್ಠಿ ಗಾತ್ರದ ಆಣಿಕಲ್ಲು ಎಲ್ಲೆಲ್ಲು ಹರಡಿತು. ಆ ಹೊಡೆತಕ್ಕೆ ನಿಮ್ಮ ಹೆಂಡತಿಯ ತಲೆಯೋಡಿದು ರಕ್ತ ಸುರಿಯ ತೊಡಗಿತು. ಗಾಬರಿಯಾದ ನೀವು ನಿಮ್ಮ ಸಂಸಾರದೊಂದಿಗೆ ಓಡಿ ಹೋಗಿ ಮರದ ಕೆಳಗೆ ಆಶ್ರಯ ಪಡೆಯುತ್ತೀರಿ. ಮಳೆಯ ರುಧ್ರವತರ ಮುಂದುವರೆದು ಎಲೆಲ್ಲೂ ನೀರು. ಎಲ್ಲೆಲ್ಲೋ ಆಹಾಕಾರ. ಜರನೆರಲ್ಲ ದಿಕ್ಕ ಪಾಲಾಗಿ ಓಡಾಡುತ್ತಿದ್ದರು. ಗಾಭರಿಯಾದ ನೀವು ನಿಮ್ಮ ಮಗು ಹೆಂಡತಿಯನ್ನು ಗಟ್ಟಿಯಾಗಿ ಬಿಗಿದಪ್ಪಿ ರಕ್ಷಿಸು ಅಂತ ದೇವರ ಮೊರೆ ಇಡುತಿದ್ದೀರಿ. ದೇವರು ನಿಮ್ಮ ಮೊರೆಗೆ ಬೆಲೆ ಕೊಡಲೇ ಇಲ್ಲ, ಪಾದದ ವರೆಗೆ ಇದ್ದ ಮಳೆ ನೀರು ಮೊಣಕಾಲು ಮುಟ್ಟಿತು. ವಿದ್ಯುತ್, ಮೊಬೈಲ್ ಕಂಬಗಳೆಲ್ಲ ಬಿದ್ದು ಸಂಪರ್ಕವೇ ಕಡಿದು ಯಾರನ್ನು ಸಹಾಯಕ್ಕೆ ಕರೆಯದ ಸ್ತಿತಿ ನಿಮ್ಮದು. ಭೂಮಿಯಲ್ಲಿ ಅಡಗಿದ್ದ ಹಾವು, ಚೇಳು ಮತ್ತು ಮುಂಗುಸಿಗಳೆಲ್ಲ ಹರಿದು ನಿಮಗೆ ಹೆಂಡತಿಗೆ ಕಚ್ಚಿದವು. ಏನು ನಡಿಯುತ್ತಿದೆ ಅನ್ನುವಷ್ಟರಲ್ಲಿ ನೀರು ಎದೆ ಮಟ್ಟಕ್ಕೆ ಏರುತ್ತದೆ. ಬೋರ್ಗರಿದು ಹರಿಯ ತೊಡಗಿತು. ನೋಡ ನೋಡತಿದ್ದಂತೆ ಎರಡು ಮೂರು ಹೆಣಗಳು ಹಾಗೆ ನಿಮ್ಮ ಮುಂದೆ ತೇಲುತ್ತ ಹೋಗುತ್ತಿವೆ. ವಿಷ ಏರಿದ ಹೆಂಡತಿ ಮೇಲ್ಗಣ್ಣು ಆಕುತ್ತಾ ಬ್ರಮೆ ಕಳೆದು ಕೊಳ್ಳುತ್ತಿದ್ದಾಳೆ. ಮಗುವನ್ನು ನಿಮ್ಮ ಹೆಗಲ ಮೇಲೆ ಕುಳ್ಳಿರಿಸಿಕೊಂಡು, ಹೆಂಡತಿಯನ್ನು ಬಲಗೈಯಿಂದ ಅಪ್ಪಿಯಿಡಿದು ಗೊಳೋ ಅಂತ ಅಳ್ತಾ ಇದ್ದೀರಿ, ಧಡ್ಡನೆ ಮಿಂಚೊಂದು ಬಂದು ಸಿಡಿಲು ಎರಗುತ್ತದೆ. ಸಿಡಿಲಿಗೆ ಮರ ಸೀಳಿ ನಿಮ್ಮ ಮೇಲೆ ಬೀಳುತ್ತದೆ. ಬಿದ್ದ ರಬಸಕ್ಕೆ ನಿಮ್ಮ ಎಡಗೈ ಕಿತ್ತು ನೀರಲ್ಲಿ ಹರಿದು ಹೋಗುತ್ತೆ. ಹೆಂಡತಿ ಜೀವ ಹೋಗಿ ಅವಳು ಶವಗುತ್ತಾಳೆ. ಎಲ್ಲಿಂದಲೋ ಬಂದ ಹೆಬ್ಬಾವು ನಿಮ್ಮ ಕೊರಳಿಗೆ ಸುತ್ತಿಕೊಂಡು ನಿಮ್ಮನ್ನು ಕಚ್ಚುತ್ತಿದೆ. ನೀರು ಮೂಗಿನ ಮಟ್ಟಕ್ಕೆ ಬಂದು ಬಿಡುತ್ತೆ. ಇರುವ ಎಲ್ಲ hopes ಕಳೆದು ಹೋಗಿವೆ, ದೇವರೇ ನನ್ನ ಇನ್ನು ಯಾಕೆ ಉಳಿಸಿದ್ದೀಯ ಅಂತ ಅಂದು ಕೊಳ್ಳುತ್ತಿರುವಾಗಲೇ ಮಗು ಕಿಟಾರನೆ ಕಿರುಚುತ್ತದೆ, ಹೆಬ್ಬಾವು ಅವಳನ್ನು ಮೂರು ಬಾರಿ ಕಚ್ಚಿದೆ, ರಕ್ತ ಸುರಿಯುತ್ತಿದೆ. ದಾರಿ ಕಾಣದೆ ನೀವು ಸತ್ತರೂ ಹೇಗೋ ಮಗು ಉಳಿಸೋಣ ಅಂತ ಹೆಣವಾಗಿದ್ದ ನಿಮ್ಮ ಹೆಂಡತಿಯನ್ನು ನಿಮ್ಮ ಕಾಲು ಕೆಳಗಾಕಿ ಅವಳ ಮೇಲೆ ನೀವು ನಿಂತು ಹೋ ಎಂದು ಅರಚುತ್ತೀರಿ, ನೀರು ನಿಮ್ಮ ತಲೆಯ ವರೆಗೆ ಬಂದು ನಿಮ್ಮ ಹುಸಿರು ನಿಂತೊಗುತ್ತದೆ. ಮಗು ನೀರಲ್ಲಿ ಮತ್ತೊಂದು ಹೆಣವಾಗಿ ಹರಿದು ಹೋಗುತ್ತದೆ.

ಒಂದು ಕ್ಷಣ ಭಯವಾಯಿತೆ? ಆಗಿರಲೇ ಬೇಕು. ಪ್ರಕೃತಿಯ ಮರ ಗಿಡ ನದಿ ಜರಿಗಳನ್ನೆಲ್ಲ ಸ್ವಾರ್ಥಕ್ಕಾಗಿ ಸರ್ವ ನಾಶ ಮಾಡಿದ ನಮಗೆ ಈ ರೀತಿಯ ಅಂತ್ಯ ಬಂದರೆ ಅಚ್ಚರಿಯೇನು ಇಲ್ಲ. ಇನ್ನು ಕಾಲ ಮಿಂಚಿಲ್ಲ ಬನ್ನಿ, ನದಿಗಳನ್ನು ಕಲುಶಿತಗೊಲಿಸುವದನ್ನು ನಿಲ್ಲಿಸೋಣ, ಮರ ಗಿಡಗಳನ್ನು ಬೆಳೆಸೋಣ. ನೀರನ್ನು ವ್ರತ ಪೋಲು ಮಾಡುವದನ್ನು ಕಡಿಮೆ ಮಾಡೋಣ. ಪರಿಸರವನ್ನು ಉಳಿಸೋಣ ಆ ಮೂಲಕ ನಮ್ಮನ್ನು ನಾವೇ ಉಳಿಸಿಕೊಳ್ಳೋಣ. ಇಲ್ಲದೆ ಹೋದರೆ 2012 ಕ್ಕೆ ಪ್ರಳಯ ಅಂತ ಎಲ್ಲ ಗ್ರಂಥಗಳಲ್ಲಿ ಬರೆದಿದ್ದು ಸುಳ್ಳಾದರೂ, ಪ್ರಳಯ ದುಗ್ಗನೆ ಬಂದು ಎಲ್ಲವನ್ನು ಅಂತ್ಯ ಕಾಣಿಸದೆ ಹೋದರೂ, ನಾವು ಸರ್ವ ನಾಶವಗುವದಂತು ಶತ ಸಿಧ್ದ. ಪ್ರಳಯ ಈಗಾಗಲೇ ಪ್ರಾರಂಭವಾಗಿದೆ. ಅದಕ್ಕೆ ಕಳೆದ ವರ್ಷ ಉತ್ತರ ಕರ್ನಾಟಕ ಬಾಗದಲ್ಲಿ ಸುರಿದ ಹುಚ್ಚು ಮಳೆ ಎಷ್ಟೊಂದು ಜೀವಗಳನ್ನು ಬಲಿ ತೆಗೆದುಕೊಂಡಿದ್ದು ಸಾಕ್ಚಿ, ಮೊನ್ನೆ ಜಪಾನಿನ ಸುನಾಮಿ, ನೆನ್ನೆಯ ಬೆಂಗಳೂರಿನ ಬೋರ್ಗರಿವ ಮಳೆಯೇ ಪ್ರತ್ಯಕ್ಷ ಪುರಾವೆ. ಇನ್ನಾದರು ನಾವು ಎತ್ತೆಚ್ಚಕೊಳ್ಳಬೇಕು, ನಮಗಾಗಿ ನಮ್ಮ ಜೀವಕ್ಕಾಗಿ.

--ರಾಜಶೇಕರಗೌಡ ಹೊತುರ್
ಬಾಗಲವಾಡ
ರಾಯಚೂರು

Saturday, November 13, 2010

ನೀನೊಂದು ಯಕ್ಷ ಪ್ರಶ್ನೆ ಗೆಳತಿ ನನಗೆ




ಬದುಕು ಬೇಡವೆಂದು ಬಲಗಾಲಿನಿಂದ ಒದ್ದಾಗ
ಬಿದ್ದು ಒದ್ದಾಡುತಿದ್ದ ನನ್ನ ಮುದ್ದು ಮಾಡಿ ಎಬ್ಬಿಸಿದವಳು ನೀನು
ಎದ್ದವನು ಗೆದ್ದು ಮೆರೆವ ಹೊತ್ತಿಗೆ ಸದ್ದೇ ಮಾಡದೆ ಸರಿದು ಹೋದೆ ಎಲ್ಲಿಗೆ?

ಸವಿಗನಸು ಕಾಣುವ ಕಣ್ಣಿಗೆ ಕಾರಿದ ಪುಡಿ ಎರಚಿ
ಮಕಾಡೆ ಮಲಗಿಸಿತ್ತು ಈ ಸಾವಿಲ್ಲದ ಸಮಯ
ಸಮಯಕ್ಕೆ ಸಡ್ಡು ಹೊಡೆದು ದಿಕ್ಸೂಚಿಯಾದವಳು ದಿಗಂತವನ್ನೇಕೆ ದಾಟಿ ಹೋದೆ?

ಕುಣಿವ ಕಾಂಚಾಣ ಕೈಯಲ್ಲಿದ್ದಾಗ ಮನೆ ತುಂಬಾ ಬಂದುಗಳು
ಕಾಂಚಾಣ ಕೈ ಕೊಟ್ಟು, ಬಂದು ಬಳಗವೆಲ್ಲ ಬಾಯಿ ತೆರೆದು ಹುಗಿತಿರುವಾಗ
ನನ್ನಲ್ಲಿ ಹುದುಗಿದ್ದ ಶಕ್ತಿಯೆಲ್ಲ ಒಗ್ಗೂಡಿ ಹೋರಾಟದ ಕಿಚ್ಚು ಹಚ್ಹ್ಚಿದವಳು ಹೊರಟೆ ಎಲ್ಲಿಗೆ?

ಜಗತ್ತು ಜಾಲಿ ಕಲ್ಲಿನಿಂದ ಹುಚ್ಚನೆಂದು ಹೊಡಿಯುತ್ತಿರುವಾಗ
ನೀರು ನೆರಳಿಲ್ಲದೆ ನರಳಿ ನರಳಿ ಸಾಯುವಾಗ
ಪ್ರೀತಿಯ ಗುಟುಕು ಕೊಟ್ಟು ಜೀವಕೆ ಜೀವ ಕೊಟ್ಟವಳು ಜೀವನದಲ್ಲಿ ಜೋತೆಯಾಗಲಿಲ್ಲ ಯಾಕೆ?
ರಾಜಶೇಕರಗೌಡ ಹೊತುರ್
Mobile: 7760961477

Sunday, October 10, 2010

ಕಳೆದು ಹೋದವಳ ಕಾಡಿಸುವ ಪ್ರೀತಿ


ಕಳೆದು ಹೋದವಳ ಕಾಡಿಸುವ ಪ್ರೀತಿ

ಆತನೋ ಕನಸುಗಳ ಬೆನ್ನೆರುವ ಹುಂಬ, ನನಸುಗಳ ಮೇಲೆ ಸವಾರಿ ಮಾಡುವ ಕದಂಬ, ಹೆಸರು ದತ್ತು. ಆಕೆಯೋ ಮಾತಿನ ಮಳ್ಳಿ, ನೋಟದಲ್ಲೇ ಹೃದಯ ಕದಿಯೋ ಕಳ್ಳಿ, ಜೀವಂತ ಶಿಲಾ ಬಾಲಿಕೆಗೆ ಇನ್ನೊಂದು ಹೆಸರೇ ಗೌರಿ.

ಅವಲ್ಲೆವೂ ಅವರ ಜೀವನ ಅತ್ಯಮೂಲ್ಯ ಸಂತಸದ ಕ್ಷಣಗಳು, ಅದರಲ್ಲಿ ಏನೋ ಒಂದು ತಾರಾ ಸುಖ ಕಂಡಿದ್ದವು ಆ ಎರಡು ಪ್ರೀತಿಯ ಹೃದಯಗಳು. ಮುಂಗಾರಿನ ತುಂತುರು ಹನಿ ಸುಟ್ಟು ಕರಲಾಗಿದ್ದ ಮಣ್ಣಿಗೆ ಜೀವ ನೀಡಿ ಮುಗ್ಗು ವಾಸನೆ ತರುವ ಇಳಿ ಸಂಜೆ ಸಮಯ. ತಲೆ ಹೋಗೋ ಕೆಲಸ ಇದ್ದರೂ ಎಲ್ಲಿತ್ತೋ ಅಲ್ಲಿಗೆ ಬಿಟ್ಟು ಚಿರತೆಯಂತೆ ಓಡಿ ಬರುತ್ತಿದ್ದ ಅವನು, rank ಹೇಗೆ ಬರೋದು ಅಂತ ಹೇಳಿಕೊಡೋ ಕ್ಲಾಸ್ ನಡಿತಿದ್ದರೂ ಅದನ್ನೇ ತಪ್ಪಿಸಿ ಜಿಂಕೆಯಂತೆ ಎಗರಿ ಎಗರಿ ಬರುತ್ತಿದ್ದ ಅವಳು. ಅವರಿಬ್ಬರ ಸಂಗಮವನ್ನೇ ಕಾಯುತಿದ್ದ ಜಿನಿ ಜಿನಿ ಹನಿಯಿಂದ ಸುರುವಾಗಿ ದೋ ಎಂದು ಸುರಿವುಯ ಆ ಮಳೆ. ಅವನ ಬಾಹುವನ್ನು ಗೌರಿ ತನ್ನೆದೆಗೆ ಗಟ್ಟಿಯಾಗಿ ತಬ್ಬಿಕೊಂಡು ಮಳೆಯನಿಯಲ್ಲಿ ನೆನೆಯುತ್ತ ಹೆಜ್ಜೆಯ ಜೊತೆ ಹೆಜ್ಜೆ ಹಾಕ್ತ ಇದ್ರೆ ಇಡೀ ರಸ್ತೆಯ ಜನ ಅವರನ್ನು ಇವರೇನು ಹುಚ್ಚರೋ ಎಂದು ಒಂದು ಕ್ಷಣ ಬೆಕ್ಕಸ ಬೆರಗಾಗಿ ನೋಡ್ತಾ ಇರ್ತಿದ್ದರು. ಹಾಲು ಕೆನೆಯಷ್ಟು ಮೃದುವಾದ ಅವಳ ಹಣೆಯಿಂದ ಜಾರಿ ಸಂಪಿಗೆಯ ಆ ಮೂಗನ್ನು ಬಳಸಿ, ಬಿಲ್ಲಿನಾಕಾರದ ಕೆಂಪು ತುಟಿಗಳಿಗೆ ಮುತ್ತಿಟ್ಟು ಉಬ್ಬಿದ ಗಲ್ಲದಿಂದ ಬಿಳುತಿದ್ದ ಪ್ರತಿ ಹನಿಯನ್ನು ಬೊಗಸೆಯಲ್ಲಿಡಿದು ಅಮ್ರುಥದಂತೆ ಕುಡಿತಾ ಇದ್ದ ದತ್ತು. ಚಂದ್ರಪ್ಪನ ಇಸ್ ಕ್ರೀಮ್ ಅಂಗಡಿಯಲ್ಲಿ ಕೋನ್ ಇಸ್ ತಗೊಂಡು ಮೆಚ್ಚಿನ ಗಾಂದಿ ಗಾರ್ಡನ್ ನ ಮೂಲೆಯ ಆಲದ ಮರದ ಕೆಳಗೆ ತೊಯ್ದ ಕಲ್ಲು ಬೆಂಚಿನ ಮೇಲೆ ಕುಲಿತುಕೊಳ್ಳುತ್ತಿದ್ದಳು ಅವಳು, ಅವಳ ಮಡಿಲಲ್ಲಿ ಮಗುವಂತೆ ಮಲಗಿ ಒಮ್ಮೆ ಎಲೆಯಿಂದ ಬೀಳುತಿದ್ದ ಹನಿಗೆ ಇನ್ನೊಮ್ಮೆ ಅವಳ ಕೋನ್ ಐಸ್ ಕ್ರೀಮ್ ಗೆ ಬಾಯಿವೊಡ್ದುತಿದ್ದ ಅವನು. ಅವಳೆಷ್ಟೇ ಸಿಮಿಡಿಗೊಂಡು ಸಿಟ್ತಾಗ್ತಾ ಇದ್ದರೂ ಅವಳ ಐಸ್ ಕಿತ್ತಿಕೊಂಡು ತಿನ್ನ್ನೋದರಲ್ಲಿ ಇರೋ ಮಜಾ ಮತ್ತೆಲ್ಲಿ ಕಾಣಲು ಸದ್ಯವೇ ಇರಲ್ಲಿಲ್ಲ ಅವನಿಗೆ. ಮಳೆ ನಿಂತು ಬೀಸುತಿದ್ದ ತಣ್ಣನೆಯ ಗಾಳಿಗೆ ಸಣ್ಣಗೆ ಚಳಿಯಾಗಿ ಅವಳನ್ನೊಮ್ಮೆ ಗಟ್ಟಿಯಾಗಿ ತಬ್ಬ್ಬಿಕೊಂಡು ಮಲಗಿದರೆ ಸಮಯ ಹೋಗಿ ರಾತ್ರಿಯಗೊದೆ ಗೊತ್ತಾಗ್ತಾ ಇರಲಿಲ್ಲ. ಒಂಬತ್ತು ಗಂಟೆಯಲ್ಲಿ ನಿಶಾಚರಿಗಳಂತೆ ಸಿಕ್ಕ ಸಿಕ್ಕ ಓಣಿ ರಸ್ತೆಗಳಲ್ಲಿ ಸುತ್ತಿ, ಸಾಕಾಗಿ ಕೊನೆಗೆ ಅವಳನ್ನು ಅವಳ ಮನೆಗೆ ಮುಟ್ಟಿಸಿ ಇನ್ನೇನು ತನ್ನ ದಾರಿ ಹಿಡಿಯಬೇಕು ಅನೋಷ್ಟರಲ್ಲಿ ಗೌರಿ ತನ್ನ ನಾಲಿಗೆಯ ಚೂಪನ್ನು ಮುಂದೆ ಮಾಡಿ ಮೂಗು ಮುರಿದು ಅಣಕಿಸಿ ಟಾಟಾ ಹೇಳಿ ಮನೆಯೊಳಕ್ಕೆ ಓಡಿದಾಗ ಅವನ ಎದೆಗೆ ಒಮ್ಮೆ ಆಕೆಯ ತುಟಿಗಳಿಂದ ಮುತ್ತಿಕ್ಕಿದಂತ ಜುಮ್ಮೆನ್ನುವ ಅನುಭವ ಹೇಗೆ ಮರಿಯೋಕೆ ಸಾದ್ಯ.
ಬೆಳಿಗ್ಗೆ ಗೋಡೆಯ ಮೇಲಿನ ಗಡಿಯಾರ ಆರು ಮುಟ್ಟೋದಕ್ಕೂ ಮೊದಲೇ ಅವಳ ಕಾಲ್ ಅವನ ಮೊಬೈಲ್ಗೆ. ಅರೆ ತೆರೆದ ನಿದ್ದೆಗಣ್ಣಲ್ಲೇ ಸೆಲ್ ಎತ್ತಿ ಕಿವಿಗಿಟ್ಟುಕೊಂಡರೆ ಕೆಲಿಸುತಿದ್ದುದು ಅವಳ ಮಧುರ ಕಂಠ ಅಲ್ಲ ಬರೀ ಸೀನುಗಳ ಮೇಲೆ ಸೀನು. ಶೀತ ಆಗಿ ಅವಳ ಮೂಗು ಕಟ್ಟಿ, ಪ್ರತಿ ಬಾರಿ ಮೂಗೆರಿಸುತಾ ಗುಡ್ ಮಾರ್ನಿಂಗ್ ಹೇಳ್ತಾ ಇದ್ದರೆ ದತ್ತುಗೆ ಒಳಗೊಳಗೇ ನಗು ಬರ್ತಾ ಇತ್ತು.
ದೇವರು ಎಷ್ಟು ಒಳ್ಳೆಯವೊನೋ ಅಷ್ಟೇ ಕ್ರೂರಿಯೂ ಹೌದು. ಅವನಿಗೆ ಒಂದು ಭಯ, ಎಲ್ಲರೂ ಸುಖವಾಗಿದ್ದರೆ ತನ್ನನ್ನೆಲ್ಲಿ ಮರೆತು ಬಿಡ್ತಾರೋ ಅನ್ನೋ ಸಂಕಟ,ಅದಕ್ಕೆ ಯಾರನ್ನು ಸಂತೋಷವಾಗಿ ಜೀವಿಸಲು ಬಿಡೋದೇ ಇಲ್ಲ. ಅದೊಂದು ಮಟ ಮಟ ಮಧ್ಯಾನ್ಹ ಕಾಲೇಜ್ ಮುಗಿಸಿ ತನ್ನ ಮುದ್ದಾದ ಪೆಪ್ಟಿ ಬೈಕಲ್ಲಿ ಗಾಳಿಯಲ್ಲಿ ತೇಲುತ್ತ ಹೋಗುತಿದ್ದಳು ಗೌರಿ.ಬಿಳಿಯ ಚೋದಿದಾರದಲ್ಲಿ ಮುತ್ತಿನಂತೆ ಕಂಗೊಳಿಸುತಿದ್ದ ಸುಂದರಿ, ಕುತ್ತಿಗೆಗೆ ಸುತ್ತಿದ್ದ ತುಪ್ಪಟ ಹಾಗೆ ಹರಡ್ತಾ ಇತ್ತು. ವಿಧಿ ಲಿಕಿತ ಯಾರು ತಾನೆ ಬಲ್ಲರು. ಹಿಂದಿನಿಂದ ಬಂದ ಟ್ರುಕ್ ನ ಕೊಂಡಿಗೆ ದುಪ್ಪಟ್ಟ ಸಿಕ್ಕಿ ಎಳೆದೆ ಬಿಡ್ತು. ಏನಾಗುತಿದೆ ಅನ್ನೋಷ್ಟರಲ್ಲಿ ಬ್ಯಾಲೆನ್ಸ್ ತಪ್ಪಿ ಬಿದ್ದಿದ್ದು ರಕ್ತದ ಮಡುವಿನಲ್ಲಿ ಹೆಣವಾಗಿ. ಕನಸಲ್ಲೂ ಎಣಿಸಿರಲಿಲ್ಲ ಅವನು, ಆ ಸೀನು, ಅಣುಕು, ಆ ಐಸ್ ಕ್ರೀಮ್ ಕೊನೆಗೆ ಅವಳೇ ದೂರ ಬಹು ದೂರ ಹೋಗ್ತಾಳೆ ಅಂತ. ಆಗೆಲ್ಲ ಮುಂಜಾನೆಯ ಸಿಹಿ ನಿದ್ದೆಯಲ್ಲಿದ್ದಾಗ ಕಾಲ್ ಮಾಡಿ ನಿದ್ದೆಗೆಡಿಸಬೇಡ ಅಂತ ಅವಳನ್ನ ಬೇಡುತಿದ್ದ. ಇವತ್ತು ನಿದ್ದೆಗೆಡಿಸಲು ಅವಳಿಲ್ಲ ಆದರೆ ಏನು ಮಾಡಿದರೂ ಅವಳ ನೆನಪುಗಳು ಮಾಯವಾಗದೆ ಎಸ್ಟೋ ರಾತ್ರಿಗಳು ನಿದ್ದೇನೆ ಇಲ್ಲದೆ ಕಳೆದು ಹೋಗ್ತಾ ಇವೆ. ಯಾರು ಏನೇ ಅದರೂ ಟೈಮ್ ತನ್ನ ನಿಯತ್ತನ್ನು ಮರೆಯೋಲ್ಲ, ಕಾಲಚಕ್ರ ನಿಲ್ಲೋಲ್ಲ. ಮತ್ತೆ ಮುಂಗಾರು ಶುರು ಆಗೋ ಸಮಯ, ಅವಳಿಲ್ಲದೆ ಐಸ್ ಸಪ್ಪೆಯಾಗಿದೆ, ಆಲದ ಮರ ಒಣಗಿ ಹೋಗಿದೆ, ದತ್ತುವಿನ ಜೀವನವೇ ಸತ್ತು ಹೋಗಿದೆ. ಸುರಿಯೋ ಮಳೆಗೆ ಮುಖ ಮಾಡಿ ಒಬ್ಬನೇ ನಿಂತು ಅವಳ ಬರುವಿಕೆಗೆ ಕಾಯ್ತಾ ಇದ್ದಾನೆ ಅವನು. ಮತ್ತೆಂದು ದತ್ತುವನ್ನು ತಿರುಗಿ ನೋಡದಂತ ಮಾಯಾ ಪ್ರಮಂಚದಲ್ಲಿ ಮಾಯವಾಗಿ ಮರೆಯಾದವಳು ಇನ್ನೆಂದು ವಾಪಸು ಬರೋದಿಲ್ಲ ಅಂತ ಗೊತ್ತು ಅವನಿಗೆ, ಆದರೂ ಕಾಯ್ತಾ ಇದ್ದಾನೆ ಯಾಕಂದ್ರೆ, ಕಾಡೋ ಆ ನೆನಪುಗಳ ಕಾಲು ಕಟ್ಟಿ ಹಾಕಲು ಇರೋ ದಾರಿ ಅಂದ್ರೆ ಕಾಯೋದು, ಕಾಯುತ ಕಾಯುತ ತನ್ನನ್ನು ತಾನು ಮರೆಯೋದು, ಅದೇ ಅಲ್ವೇ ಪ್ರೀತಿ.

--ರಾಜಶೇಕರಗೌಡ ಹೋತುರು.
rjgouda@gmail.com
ಬಾಗಲವಾಡ
ರಾಯಚೂರು
7760961477

Thursday, September 30, 2010

ಗೆಳತಿ ಪ್ರೀತಿಸು ನನ್ನ


ಗೆಳತಿ ಪ್ರೀತಿಸು ನನ್ನ

ಒಮ್ಮೆ ಹೇಳು ಗೆಳತಿ ನೀ ನನ್ನ ಪ್ರೀತಿಸುವೆ ಎಂದು

ನಾನೇನು ಆ ಬೆಳದಿಂಗಳು ಸುರಿಸೋ ಚಂದಿರನನ್ನು
ಹಿಡಿದು ನಿನ್ನ ತಲೆಯಲ್ಲಿ ಕಂಪು ಸೂಸೋ ಮಲ್ಲಿಗೆ ಹೂವಾಗಿಸಿ ಮುಡಿಸಲಾರೆ
ಆದರೆ ನನ್ನ ಜೀವನದ ಕಟ್ಟ ಕಡೆ ಗಳಿಗೆಯವರೆಗೆ ನಿನ್ನ ಪ್ರತಿ ಹೆಜ್ಜೆಗೆ
ಕಮಲದ ದಳಗಳನ್ನು ಹಾಸಿ ಪ್ರೀತಿಸುವೆ.

ಒಮ್ಮೆ ಹೇಳು ಗೆಳತಿ ನೀ ನನ್ನ ಪ್ರೀತಿಸುವೆ ಎಂದು

ಹರಿಯೋ ಜಲಪಾತವನ್ನು ಹಿಡಿದು ಮಡಿಸಿ ನಿನ್ನ ಬಳುಕುವ
ಬಳ್ಳಿಯಂತ ದೇಹಕ್ಕೆ ಸೀರೆಯಾಗಿಸಿ ಉಡಿಸಲಾರೆ
ಆದರೆ ನನ್ನ ಎದೆಯ ಕೊನೆ ಉಸಿರಿರುವವರೆಗೆ ಕೆನೆಯಷ್ಟು ಮೃದುವಾಗಿರುವ
ನಿನ್ನ ಚರ್ಮಕ್ಕೆ ಹೊಂಗಿರಣವೂ ಚುಚ್ಚಿ ನೋಯಿಸದಂತೆ ಪ್ರೆಮಿಸುವೆ.

ಒಮ್ಮೆ ಹೇಳು ಗೆಳತಿ ನೀ ನನ್ನ ಪ್ರೀತಿಸುವೆ ಎಂದು

ಮಜ್ನುನಂತೆ ಇತಿಹಾಸ ಬರೆವಷ್ಟು ಪ್ರೀತಿಸಲಾರೆ,
ಶಹಜಾನ್ ನಂತೆ ತಾಜ್ಮಹಲ್ ಕಟ್ಟಿ ಎಷ್ಟು ಪ್ರೀತಿಸುತಿದ್ದೆ ಅಂತ ಜಗತ್ತಿಗೆ ತೋರಿಸಲಾರೆ
ಆದರೆ ನೀನು ಎಂಬತ್ತು ವಯಸ್ಸಿನ ಮುದಿಕಿಯಾಗಿ, ಮುಖವೆಲ್ಲ ಸುಕ್ಕುಗಟ್ಟಿ
ನಡೆಯಲು ಆಸರೆ ಬೇಕು ಅಂದಾಗ ನಿನ್ನನ್ನು ನನ್ನೆದೆಗೆ ಗಟ್ಟಿಯಾಗಿ ಅಪ್ಪಿಕೊಂಡು ಮುನ್ನಡೆಸುವೆ.

ಗೆಳತಿ, ಒಮ್ಮೆ ಹೇಳು ಗೆಳತಿ ನೀ ನನ್ನ ಪ್ರೀತಿಸುವೆ ಎಂದು

--ರಾಜಶೇಕರಗೌಡ ಹೊತುರ್
ಬಾಗಲವಾಡ
rjgouda@gmail.com
7760961477

ನಾನೇ ನೀನು ನೀನೆ ನಾನು



ನಾನೇ ನೀನು ನೀನೆ ನಾನು

ನಿಜ ಹೇಳ್ಲ ಗೌರಿ,
ನಿನ್ನನ್ನೆಂದು ನಾ ಪ್ರಿತಿಸಲೇ ಇಲ್ಲ.
ಹೃದಯ ರಕ್ತ ಎಂದಾದರೂ ಹೇಳಿವೆಯಾ ಒಂದಕ್ಕೊಂದು ಪ್ರೀತಿಸುತ್ತೆವೆಂದು?
ಹಗಲು ರಾತ್ರಿ ಎಂದಾದರೂ ಹೇಳಿವೆಯಾ ಒಂದಕ್ಕೊಂದು ಪ್ರೆಮಿಸುತ್ತೆವೆಂದು?
ಭೂಮಿ ಬಾನು ಎಲ್ಲಿಯಾದರೂ ಬರೆದಿವೆಯಾ ಒಂದಿಲ್ಲದೆ ಏನೂ ಇಲ್ಲ ಎಂದು?
ನಿನ್ನನ್ನೆಂದು ನಾ ಪ್ರಿತಿಸಲೇ ಇಲ್ಲ
ನನ್ಗೊತ್ತಿರೋದು ಒಂದೇ,ಇಲ್ಲಿ ನಾನು ನೀನು ಅನ್ನೋದೇ ಇಲ್ಲ
ಯಾಕಂದ್ರೆ ನಿನ್ನಿಲ್ಲದೆ ನಾನಿಲ್ಲ ಕಣೆ.

ನಿಜ ಹೇಳ್ಲ ಗೌರಿ,
ನಿನ್ನನ್ನೆಂದು ನಾ ಪ್ರೇಮಿಸಲೇ ಇಲ್ಲ.
ಕೆನೆ ಹಾಲಿನಿಂದ ಹುಟ್ಟಿದರೂ ಹೆಲೆಂದಾದರು ಹೇಳಿದೆಯ ನನ್ನಿಂದ ನೀನು ಎಂದು
ಜೇನಹನಿ ಗೂಡಿನಲ್ಲಿ ಬೆಳೆದರೂ ಗೂಡು ಎಂದಾದರು ಕೇಳಿದೆಯ ನನ್ನಿಂದ ನೀನು ಎಂದು
ಬೂದಿ ಬೆಂಕಿಯಿಂದ ಬಂದರು ಬೆಂಕಿ ಎಲ್ಲಾದರೂ ಬೆರಳು ಮಾಡಿ ತೋರಿಸಿದೆಯ ನಾನಿಲ್ಲದೆ ನೀನಿಲ್ಲ ಎಂದು
ನಿನ್ನನ್ನೆಂದು ನಾ ಪ್ರೇಮಿಸಲೇ ಇಲ್ಲ
ನನ್ಗೊತ್ತಿರೋದು ಒಂದೇ,ಇಲ್ಲಿ ನೀನು ಬರುಕಿರುವದಕ್ಕೆ ನನ್ನ ಬದುಕಿದೆ.
ಯಾಕಂದ್ರೆ ನಿನ್ನಿಲ್ಲದೆ ನಾನಿಲ್ಲ ಕಣೆ.

--ರಾಜಶೇಕರಗೌಡ ಹೊತುರ್
ಬಾಗಲವಾಡ
rjgouda@gmail.com
7760961477

Sunday, September 19, 2010

ಹೇ ಕೆಂಪು ಮೂಗಿನ ಕೆಂಚಿ

ಹೇ ಕೆಂಪು ಮೂಗಿನ ಕೆಂಚಿ,

ಹೇಗಿದ್ದೀಯ? ಇನ್ನೂ ನಿನ್ನ ಮೂಗು ಕೆಂಪಗೆ ಇದೆಯಾ? ಅಥವಾ ಜ್ವರ ಕಡಿಮೆ ಆಗಿ ಬಿಳಿಯಾಗಿದೆಯಾ?
ನಿಜ ಹೇಳಲಾ ಚಿನ್ನ, ಕಳೆದ ಮೂರು ದಿನದಿಂದ ನಾನು ನಾನಗೆ ಇಲ್ಲ, ಸರಿಯಾದ ಸಮಯಕ್ಕೆ ಊಟ, ನೀಟಾಗಿ ತೊಳೆದ ಬಟ್ಟೆ, ಇನ್ ಟೈಮ್ ನಲ್ಲಿ ಆಫೀಸ್ ನಲ್ಲಿ ಇರೋ ಶಿಸ್ತಿನ ಶಿಪಾಯಿ ಅಂತ ಕರಿತಿದ್ದೆಯಲ್ಲ ನೀ ನನ್ನ, ಈಗ ನನ್ನ ಸ್ಥಿತಿ ನೋಡಿದರೆ ನೀನು ಎದೆ ಒಡೆದು ಸತ್ತೆ ಹೋಗ್ತೀ ಏನೋ. ಯಾಕೋ ಗೊತ್ತಿಲ್ಲ ಕಣೆ ನೀನು ನಿಂಗೆ ಜ್ವರ ಬಂದಿದೆ ಅಂತ ಮೆಸೇಜ್ ಮಾಡಿದಾಗಿನಿಂದ ನಿನ್ನ ಬಿಟ್ಟು ಬೇರೆ ಏನೂ ಯೋಚೆನೆ ಮಾಡೋಕೆ ಆಗ್ತಾ ಇಲ್ಲ. ನಿಂಗೊತ್ತಾ ನಾನು ನನ್ನ ವಿದೇಶಿ ಸಹೋದ್ದೋಗಿಗಳ ಜೊತೆ ಪ್ರಾಜೆಕ್ಟ್ ಬಗ್ಗೆ ಚರ್ಚೆ ಮಾಡ್ತಾ ಇದ್ದಾಗ ನಿನ್ನ ಮೆಸೇಜ್ ಬಂತು, ಒಂದು ಕ್ಷಣ ಬೆವತು ಹೋಗಿ ಏನೂ ಮಾಡಬೇಕು ಅಂತ ತೋಚದೆ ಆ ಮೀಟಿಂಗ್ ಅರ್ಧದಲ್ಲೇ ಬಿಟ್ಟು ಹೊರನಡೆದೆ. ಅದರಿಂದಾಗಿ ಒಂದು ಲಕ್ಷ ಡಾಲರ್ ಕಿಮ್ಮತ್ತಿನ ಪ್ರಾಜೆಕ್ಟ್ ನಮ್ಮ ಕಂಪನಿಯ ಕೈ ಬಿಟ್ಟು ಹೋಯ್ತು, ಮ್ಯಾನೆಜೆರ್ ನನ್ನ ಬೇರೆ ಡಿಪಾರ್ಟ್ಮೆಂಟ್ ಗೆ ವರ್ಗ ಮಾಡಿದ್ದಾನೆ, ಚಿಂತೆ ಇಲ್ಲ ಚಿನ್ನ ನಿನ್ನ ಮುಂದೆ ಈ ಪ್ರಾಜೆಕ್ಟ, ಆ ಕೆಲಸ ಏನು ದೊಡ್ದದಲ್ಲ ಬಿಡು.
ಒಂದಂತೂ ಸತ್ಯ ಕಣೆ, ಮೀಟಿಂಗ್ ಅರ್ಧದಲ್ಲೇ ಬಿಟ್ಟು ನಿನ್ನ ರೂಮಿಗೆ ಬರುವಷ್ಟರಲ್ಲ್ಲಿ ಸಂಜೆ ಸೂರ್ಯ ಮುಳುಗಿ ಗಂಟೆ ಎಂಟಾಗಿತ್ತು. ನೀನು ಆಗಲೇ ಗುಳಿಗೆ, ಟಾನಿಕ್, ಜಂಡೂಭಾಂ ಜೊತೆ ಮಲಗಿದ್ದೆ. ನಿನ್ನ ಹಣೆಗೆ ಕೈಯಿಟ್ಟರೆ ಕೆಂಡದಂತ ಬಿಸಿ, ಗಡ ಗಡ ನಡುಗಿ ನೀ ಮಲಗಿದ ಮಂಚದ ಮೇಲೆ ಕುಳಿತು ನಿನ್ನ ಒಮ್ಮೆ ಗಟ್ಟಿಯಾಗಿ ಎದೆಗಪ್ಪಿಕೊಂಡೆ, ಹೆನ್ನಪ್ಪಿಯಂತೆ ಗಳ ಗಳ ಅಂತ ಅಳಲಿಲ್ಲವದರೂ ನಂಗೆ ಗೊತ್ತಿಲ್ಲದೇ ನನ್ನ ಕಣ್ಣಿಂದ ಎರಡು ಹನಿ ಉದುರಿತ್ತು, ರಾತ್ರಿ ಪೂರ ನಿನ್ನ ತಲೆ ನೀವುತ್ತ, ತಣ್ಣೀರು ಬಟ್ಟೆ ಹಾಕುತ್ತ, ನನ್ನ ಎದೆಮೇಲೆ ಮಲಗಿಸಿಕೊಂಡು ಮುಂಜಾನೆವರೆಗೆ ನಿನ್ನ ಎಚ್ಚರಕ್ಕೊಸರ ಕಾಯುತ್ತ ಇದ್ದೆ. ನೀನು ಎದ್ದು ನನ್ನ ಎದೆಯ ಶರ್ಟ್ ಗುಂಡಿನನ್ನಿ ಸಿಕ್ಕಿ ಹಾಕಿಕೊಂಡಿದ್ದ ನಿನ್ನ ಉದ್ದದ ಕೊದಲ್ಲನ್ನು ಬಿಡಿಸಿಕೊಂಡು ಮೆಲ್ಲನೆ ನಗುತ್ತ ನನ್ನ ಕೆನ್ನೆ ಚೂಟಿದಾಗಲೇ ನಾ ಈ ಜಗತ್ತಿಗೆ ಬಂದಿದ್ದು, ರಾತ್ರಿ ಊಟ ಮಾಡದೇ ನಿದ್ದೆ ಇಲ್ಲದ ನಿನ್ನ ಪಕ್ಕದಲ್ಲೇ ಮಲಗಿದ್ದೆ ಅಂತ ಗೊತ್ತಾಗಿದ್ದು. ನಿನ್ನ ಮುಖ ಮೊದಲಿನ ತರಾ ಕಿಲ ಕಿಲ ಅಂತ ಇರ್ಲಿಲ್ಲ ಆದರೋ ಆ ಸಣ್ಣ ನಗು ನೋಡಿ ಸಣ್ಣಗೆ ಸಮಾದಾನ ಆಯ್ತು. ಪ್ರೀತಿಸಿದವಳನ್ನು ರಾತ್ರಿ ಪೂರ್ತಿ ಎದೆ ಮೇಲೆ ಮಲಗಿಸಿಕೊಂಡು ಹಾರೈಕೆ ಮಾಡಿದ ಆ ಅನುಭವ ಏನೋ ಒಂದು ತರಾ ಕುಶಿ ಕೊಡ್ತಾ ಇತ್ತು, ಹಾಗೆ ನಂಗೂಸ್ಕರ ಒಂದು ಜೀವ ಇದೆ ಅಂತ ನನ್ನೊಳಗೆ ನಾನೇ ಬೆನ್ನು ತಟ್ಟಿಕೊಳ್ಳುತ್ತ ಇನ್ನು ಮುಂದೆ ಜೀವನದಲ್ಲಿ ಜವಬ್ದಾರಿಯಿಂದ ನಡೀಬೇಕು ಅಂತ ಅನ್ನುಸೋಕೆ ಸುರುವಾಯ್ತು. ಅದೇನೋ ಗೊತ್ತಿಲ್ಲ ಕಣೆ ಹಿಂದೆಲ್ಲ ಈ ಗುಳಿಗೆ, ಟಾನಿಕ್, ಜಂಡೂಭಾಂ ವಾಸನೆ ಕಂಡರೆ ವಾಕರಿಕೆ ಬರ್ತಾ ಇತ್ತು , ಅಜ್ಜಿ ತನ್ನ ಕಾಲಿಗೆ ಜಂಡೂಭಾಂ ಅಚ್ಚಿಕೊಂಡು ಕೊತಿದ್ದರೆ ಅವಳ ಹತ್ತಿರ ಕೂಡ ಹೋಗ್ತಾ ಇರ್ಲಿಲ್ಲ, ಆದ್ರೆ ನಿನ್ನ ತಲೆಗೆ ನಾನೇ ಜಂಡೂಭಾಂ ಹಚ್ಚಿ ಎದೆಮೇಲೆ ಮಲಗಿಸಿಕೊಂದೊದ್ದರೂ ನಂಗೆ ಏನೂ ಅನ್ನಿಸಲೇ ಇಲ್ಲ. ನೆನೆಸಿಕೊಂಡರೆ ನಂಗೆ ನಗು ಬರ್ತಾ ಇದೆ ಪ್ರೀತಿಯಂದರೆ ಇದೇನಾ ಅಂತ. ಅಲ್ಲಿವರೆಗೆ ಟೆನ್ಶನ್ನಲ್ಲಿ ಇದ್ದ ನಂಗೆ ಒಮ್ಮ್ಲೆಗೆ ಹೊಟ್ಟೆ ಹುನ್ನಗುವಸ್ಟು ನಗು ಬಂದಿದ್ದು ನಿನ್ನ ಆ ಕೆಂಪು ಮೂಗು ನೋಡಿ. ನಿಂಗೆ ಜ್ವರ ಬಂದಾಗ, ನೆಗಡಿ ಆದಗ ಮೂಗು ಕೆಂಪಗೆ ಆಗುತ್ತಲ್ಲ, ಅದು ನಿಂಗೆ ಮುಜುಗರ ತಂದರೂ ನಂಗೆ ನೀ ಸುಂದರವಾಗೇ ಕಾಣುತ್ತೀಯ ಕಣೆ.
ಅಲ್ಲಿವರೆಗೋ ಇದ್ದ ಆ ಸಮಾದಾನ, ನಗು, ಆ ಫೀಲಿಂಗ್ ಒಮ್ಮೆಗೆ ಚೂರು ಚೂರು ಆಗಿದ್ದು ನಿನ್ನ ತಂದೆ ನಿನ್ನನ್ನು ಊರಿಗೆ ಕರೆದುಕೊಂಡು ಹೋಗಲು ಬಂದಾಗ. ವಲ್ಲದ ಮನಸ್ಸಿಂದ ನೀನು ಹೊರಡಲು ನಿಂತಿದ್ದೆ, ಇಲ್ಲದ ಮನಸ್ಸಿಂದ ಕಳಿಸಲು ನಾನು ಕುಳಿತಿದ್ದೆ. ಇವತ್ತಿಗೆ ನೀನು ನಿನ್ನೂರು ಸೇರಿ ಒಂದು ವಾರ ಕಳೆಯಿತು ಚಿನ್ನ, ಒಂದು ಕಾಲ್ ಇಲ, ಮೆಸೇಜ್ ಇಲ್ಲ, ನೀನಿಲ್ಲದೆ ನಿನ್ನ ನೆನಪಿನ ಜೊತೆ ಜೋಕಾಲಿ ಆಡಿ ಸಾಕಾಯ್ತು ಕಣೆ. ಬೇಗ ಬಾ, ಕಡೆ ಪಕ್ಷ ಕಾಲ್ ಮಾಡು, ನಿನ್ನ ಮೂಗು ಹೇಗಿದೆ ಅಂತ ತಿಳಿಸು. ನಿನಗೋಸ್ಕರ ಕಾದಿರುವ ನಿನ್ನ ಹುಡುಗ.


-Rajashekara Gouda
rjgouda@gmail.com
7760961477