Tuesday, May 24, 2011

ನಾನು ಸತ್ತ ಮೇಲಾದ್ರು ನಿಂಗೆ ಬುದ್ದಿ ಬರಲಿ


ನಾನು ಸತ್ತ ಮೇಲಾದ್ರು ನಿಂಗೆ ಬುದ್ದಿ ಬರಲಿ

ಬಹಳಷ್ಟು ಜನ ನಂಗೆ ಮೇಲ್ ಮತ್ತು ಮೆಸೇಜ್ ಮಾಡಿ ಕೇಳ್ತಾ ಇದ್ರು ಯಾಕೆ ಇತ್ತೀಚಿಗೆ ಲವ್ ಸ್ಟೋರಿಗಳನ್ನು ಬರಿಯೋದನ್ನು ನಿಲ್ಲಿಸಿ ಬಿಟ್ಟಿದ್ದೀರಿ ಅಂತ. ಕೇಳಿದವರಲ್ಲಿ ಹುಡುಗರು ಇದ್ದರು ಹುಡಿಗಿಯರು ಇದ್ದರು. ನನ್ನ ಎಲ್ಲ ಲವ್ ಸ್ಟೋರಿಗಳಲ್ಲಿ ಹುಡಿಗೀರು ನಂಗೆ ಕೈ ಕೊಡುತ್ತಿದ್ದರಿಂದ ಎಲ್ಲರು ನಂಗೆ ಲವ್ failur ಆಗಿದೆ ಅಂತಾನೆ ತಿಳಿದಿದ್ದರು. ನಂಗೆ ಲವ್ failur ಅಂತ ಆಗಿಲ್ಲವಾದರೂ ಇಷ್ಟ ಪಟ್ಟ ಹುಡಿಗಿ ಸಿಗಲಿಲ್ಲ ಅನ್ನೋ ಸಣ್ಣ ನೋವು ಆಗಾಗ್ಗೆ ಕಾಡೋದು ನಿಜ. ಅದು ಲವ್ ಅನ್ನೋದಕಿಂತ ಜಸ್ಟ್ aaadaaaಕ್ರುಶ್. ಬರಿ ಲವ್ failur ನೆ ಯಾಕೆ ಬರಿತಿದ್ದೆ ಅಂದರೆ ನನ್ನ ಸುತ್ತ ಮುತ್ತ ಸಾವಿರಾರು ಜನ ತಮ್ಮ ಪ್ರೀತಿ ಕಳೆದುಕೊಂಡು ಜೀವನವೇ ಬರಿದಾಗಿಸಿಕೊಂದಿದ್ದಾರೆ, ಎಷ್ಟೋ ಸ್ನೇಹಿತರು ಸಾವಿನ ಕಡೆ ಮುಖ ಮಾಡಿದ್ದಾರೆ. ಅವರೆಲ್ಲರ ನೋವನ್ನು ಯಾರು ಶಮನ ಮಾಡಲು ಸಾಧ್ಯವಿಲ್ಲದಿದ್ದರೂ ನಿಮ್ಮೊಂದಿಗೆ ನಿಮ್ಮಂತೆ ನಿಮ್ಮಷ್ಟೇ ನೋವು ಅನುಭವಿಸುವ ನಾನು ಒಬ್ಬ ಇದ್ದೀನಿ ಎಂದು ನನ್ನ ಕಥೆ ಹೇಳುವ ಮೂಲಕ ಸ್ವಲ್ಪನಾದರು ಅವರನ್ನು ಸಮದಾನಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಕಥೆಗಳಿಂದ ಒಂದು ಹೃದಯದ ನೋವು ಕಡಿಮೆ ಆಗಿ, ಕಳೆದುಕೊಂಡ ಪ್ರೀತಿನ ಮರೆತು ಹೊಸ ಜೀವನಕ್ಕೆ ಕಾಲಿರಿಸಿದರೆ ನನ್ನ effort ಸಾರ್ತಕ ಆದಂತೆ. ಆದರು ಇಷ್ಟು ದಿನ ಯಾಕೋ ನಂಗೆ ಬರಿ ಬೇಕು ಅಂತ ಅನ್ನಿಸಲೇ ಇಲ್ಲ. ಆದ್ರೆ ಇವತ್ತು ಒಂದು ವಿಚಿತ್ರವಾದ ಘಟನೆಯನ್ನು ನೋಡಿ ಏನಾದ್ರು ಬರಿಲೆ ಬೇಕು ಅಂತ ಅನ್ನಿಸಿತು.
ಪ್ರೀತಿ ಗುರಿ ಮುಟ್ಟಿಸುವ ಬಿಲ್ಲಾಗಬೇಕೆ ಹೊರತು ಜೀವ ತೆಗೆಯುವ ಚೂರಿ ಆಗಬಾರದು. ಮಂಡ್ಯದ ಗೆಳೆಯ ದೀಪಕ್ ಗೆ ಪ್ರೀತಿ ಬರಿ ಚೂರಿಯಾಗಿರದೆ ಜಾತಿಯ ವಿಷ ಲೇಪಿತ ಖಡ್ಗವಾಗಿ ಸಾವಿನ ಕುಣಿಕೆಗೆ ಕೊರಳೋಡ್ಡುವಂತೆ ಮಾಡಿದ್ದು ಮಾತ್ರ ವಿಧಿಯ ವಿಪರ್ಯಾಸ. ದಿನದ ಕೆಲಸ ಮುಗಿಸಿ ಬೆಂಗಳೂರಿನ ಇಳಿ ಸಂಜೆ ಮಳೆಯಲ್ಲಿ ತೋಯ್ದು ಮನೆ ಸೇರಿ ಟಿವಿ ಆನ್ ಮಾಡಿ TV -9 ನಲ್ಲಿ 'ಜಾತಿ ಕೊಂದ ಪ್ರೀತಿ' ಕಾರ್ಯಕ್ರಮ ನೋಡಿ ಒಂದು ಕ್ಷಣ ಖಿನ್ನನಾದೆ. ಕೇವಲ 24 ವಯಸ್ಸಿನ ಸ್ಪುರದ್ರೂಪಿ ಯುವಕ ತನ್ನ ಪ್ರೇಯಸಿ ಜಾತಿಯನ್ನು ಅಡ್ಡ ಇಟ್ಟು ಮದುವೆ ಆಗಲು ಒಪ್ಪಿಲ್ಲ ಅಂತ ನೇಣು ಬಿಗಿದುಕೊಂಡು ಜೀವ ತೆತ್ತಿದ್ದಾನೆ ಇವತ್ತು. ಇಲ್ಲಿ ಆ ಹುಡಿಗಿಯದ್ದು ತಪ್ಪೋ, perents ದು ತಪ್ಪೋ ಜಾತಿಯ ಬೇರಿನ ಮೇಲೆ ಮರದಂತೆ ಬೆಳೆದಿರೋ ನಮ್ಮ ಸಮಾಜದ ತಪ್ಪೋ ಅನ್ನೋದನ್ನು ವಿಶ್ಲೇಷಣೆ ಮಾಡೋದುಕಿಂತ ವಿನ ಕಾರಣ ನಿನ್ನ ಜೀವ ಕಳೆದುಕೊಂಡೆಯಲ್ಲ ಅನ್ನೋದೇ ವಿಪರ್ಯಾಸದ ಸಂಗತಿ. ಗೆಳಯ ನೀನು ಬರೆದಿಟ್ಟ death ನೋಟ್ ಗಿಂತ ನಿನ್ನ ಅಪ್ಪ, ಅಮ್ಮ, ಅಜ್ಜಿಯ ರೋದನ ಕರಳು ಹಿಂಡುವಂತೆ ಇತ್ತು. 'ಕಷ್ಟ ಪಟ್ಟು ಹೆತ್ತು ಹೊತ್ತು ಬೆಳಸಿ ಸಾಲ ಸೋಲ ಮಾಡಿ ಮಗನನ್ನು ಓದಿಸಿ ಅವನ ಜೀವನ ಸುಂದರ ಹೂತೋಟ ದಲ್ಲಿ ಹರಳುವ ಮಲ್ಲಿಗೆ ಹೂವಾಗಿ ಅರಳಿ ಮುಪ್ಪಿನ ಕಾಲದಲ್ಲಿ ಆಸರೆಯಾಗುತ್ತಾನೆ ಅಂದುಕೊಂಡಿದ್ದರೆ ಈತ ಇಷ್ಟ ಪಟ್ಟ ಹುಡಿಗಿ ಮೋಸ ಮಾಡಿದಲೆಂದು ನಮಗೆ ಮೋಸ ಮಾಡಿ ಬರಲಾರದ ಲೋಕಕ್ಕೆ ಹೋದರೆ ಹೇಗೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಆ ಶಿಕ್ಷೆ ತಪ್ಪಿತಸ್ತರನ್ನು ಸರಿ ದಾರಿಗೆ ತರಿಸುವಂತಿರಬೇಕು, ಆದರೆ ಅವಳು ಮಾಡಿದ ತಪ್ಪಿಗೆ ಇರುವ ಒಬ್ಬ ಮಗ ನೀನು ಬಲಿಯಾಗಿ ನಮ್ಮ ಜೀವನವನ್ನೇ ಕತ್ತಲು ಮಾಡಿದೆಯಲ್ಲ ಇದು ಯಾವ ನ್ಯಾಯ' ಎಂದು ಬಿಕ್ಕಿದ ತಂದೆಯ ನೋವು ಎಂತಾದ್ದು ಅನ್ನೋದು ಆ ದೇವರಿಗೆ ಅರ್ಥವಾಗಬೇಕು. ದೋಸ್ತ, ಕೈಯ ಕಿರು ಬೆರಳಿನ ಉಗುರು ಎದ್ದು ಹೂ ಕೀಳುವಾಗ ಗಿಡಕ್ಕೆ ತಾಗಿದರೆ ಅಮ್ಮ ಅಂತ ಕೂಗುವ ನೀನು, ಕುಣಿಕೆಯ ಅಗ್ಗ ನಿನ್ನ ಕುತ್ತಿಗೆಗೆ ಬಿಗಿದು ಆ ಅಗ್ಗ ಹಿಡಿ ಹಿಡಿಯಾಗಿ ನಿನ್ನ ರಕ್ತವನ್ನು ಕೀಚುತ್ತಿರುವಾಗ ಅಮ್ಮ ಅನ್ನುವ ಒಂದು ಶಬ್ದ ಬರಲಿಲ್ಲವೇ? ಅಮ್ಮನ ಆ ಪ್ರೀತಿ ನೆನಪಾಗಲಿಲ್ಲವೇ. ತಂದೆ ತಾಯಿಯ ವರುಷಾನು ವರುಷದ ನಿಷ್ಕಳಂಕದ ಪ್ರೀತಿಗಿಂತ ಮೊನ್ನೆ ಮೊನ್ನೆ ಬಂದ ಮೋಸ ಮಾಡುವ ಹುಡಿಗಿಯ ಪ್ರೀತಿಯೇ ದೊಡ್ದದಾಯಿತೆ? ಸಿಗುವ ಒಂದು ಜೀವನವನ್ನೇ ತಿಂದು ಹಾಕುವ ಆ ಪ್ರೀತಿ ಬೇಕಾ? TCS ನಂತ ಪ್ರತಿಷ್ಟಿತ ಕಂಪನಿಯಲ್ಲಿ ಕೆಲಸ ಮಾಡುತಿದ್ದ ನೀನು, ನಿನ್ನ ಪ್ರೀತಿಸುತ್ತಿದ್ದ ಒಂದು ಹೃದಯದ ದನಿಗಾಗಿ ಹಾತೊರಿಯುತಿದ್ದರೆ, ನಿನ್ನ ಪ್ರೀತಿಸುವ ಹತ್ತು ಹೃದಯದ ಕೂಗು ಕೇಳಲಿಲ್ಲವೇ ನಿನಗೆ. ಯಾರಿಗೆ ಬುದ್ದಿ ಕಲಿಸಲು ಈ ಶಿಕ್ಷೆ? ಕಣ್ಣಲ್ಲಿ ದೂಳು ಬಿದ್ದಾಗ ಕಣ್ಣಂಚಿನಿಂದ ಹೊರ ಬೀಳುವ ಕಣ್ಣೀರು ನೇರ ಕೆಳಗೆ ಬೀಳದೆ ಕೆನ್ನೆ ಸವರಿ ಬೀಳುತ್ತದೆ.ನಿನ್ನ ಮನದಲ್ಲಿ ಮೋಸದ ದೂಳು ಬಿದ್ದಾಗ ನಿನ್ನ ಜೀವ ನಿನ್ನ ತಂದೆ ತಾಯಿಯನ್ನು ನೆನೆಯಲೇ ಇಲ್ಲವಲ್ಲ ಗೆಳೆಯ.
ನಮ್ಮಲ್ಲಿ ಎಷ್ಟೋ ಜನರಿಗೆ ಆ ದೇವರು ಕಣ್ಣು ಕೊಟ್ಟಿಲ್ಲ, ಕಾಲು ಕೊಟ್ಟಿಲ್ಲ, ಕೈ ಕೊಟ್ಟಿಲ್ಲ, ಎಲ್ಲ ಕೊಟ್ಟು ದಿನವು ಸಾಯುವ ಬದುಕನ್ನು ಕೊಟ್ಟಿದ್ದರೂ ಅವರೆಲ್ಲ ಎದೆಗುಂದದೆ ಜೀವನ ನಡೆಸುತಿದ್ದಾರೆ, ಎಲ್ಲ ಇದ್ದು ಯೋಚನೆ ಮಾಡಲು ಯೋಗ್ಯವಲ್ಲದ ಹುಚ್ಚು ಪ್ರೀತಿಗಾಗಿ ಸಾಯಿಯುದು ಹೇಡಿತನ ಅಲ್ಲವೇ. ನಿನಗೆ ಸಾವೇ ಎಲ್ಲಕ್ಕಿಂತ ಮುಕ್ಯ ಆನಿಸಿದ್ದರೆ ಒಮ್ಮೆ ಸರಕಾರೀ ಆಸ್ಪೆತ್ರೆಗೆ ಹೋಗಿ ಬರಬೇಕಿತ್ತು, ಸಿಗಲಾರದ ಜೀವಕೊಸ್ಕರ ಹೋರಾಡುವ ನೂರಾರು ಜನರ ಆರ್ಥ ನಾದ, ಸಿಕ್ಕ ನಿನ್ನ ಸುಂದರ ಜೀವವನ್ನು ಕಂಡಿತ ಉಳಿಸುತ್ತಿತ್ತು ದೋಸ್ತ. ಮನಸ್ಸು ಬಾರವಾಗಿ ಜೀವನ ಸಾಕು ಅನ್ನಿಸಿದಾಗ ಯಾವುದೊ ಅನಾಥಾಲಯಕ್ಕೆ ಹೋಗಿದ್ದಾರೆ ನಿನ್ನ ಹಣೆ ಬರಹವೇ ಬದಲಾಗುತಿತ್ತು. ಒಮ್ಮೆ ಯಾರೋ ಹೇಳಿದರು 'Nick Vujicic (http://www.attitudeisaltitude.com/)' ನ ಬಗ್ಗೆ. ಯಾವುದೋ ಸಣ್ಣ ವಿಷಯಕ್ಕೆ ಆಕಾಶವೇ ತಲೆ ಮೇಲೆ ಬಿದ್ದವರಂತೆ ಮನಸಿನ ಸ್ತಿಮಿತ ಕಳೆದು ಕೊಂಡಿದ್ದ ನನಗೆ ಕೈ ಅಷ್ಟೇ ಅಲ್ಲ ಎರಡು ಕಾಳುಗಲಿಲ್ಲದಿದ್ದರೂ ಆತನ ನಗು, ಜೀವನವನ್ನು ಪ್ರೀತಿಸಿವ ರೀತಿ ನೋಡಿ ಒಮ್ಮೆ ಅತ್ತು ಬಿಟ್ಟೆ. ಜೀವನ ಬರಿ ದೊಡ್ಡದಲ್ಲ ಗೆಳೆಯ ಆಳವಾಗಿದೆ.

ಸ್ನೇಹಿತರೆ ಹುಟ್ಟು ಸಾವು ತಾವಾಗೆ ಬರಬೇಕು, ಅದೆಂತ ಕಷ್ಟ ಬಂದರು ದಯವಿಟ್ಟು ಸಾವಿನ ಯೋಚನೆ ಮಾಡಬೇಡಿ. ಅಪ್ಪಿ ತಪ್ಪಿ ಏನಾದರೂ ನಿಮ್ಮ ತಲೆಯಲ್ಲಿ ಸಾವಿನ ಬಗ್ಗೆ ಯೋಚನೆ ಬಂದರೆ ಮೇಲೆ ಹೇಳಿದ ಒಂದು ಕೆಲಸ ಮಾಡಿದರೆ ಸಾಕು. ನಿಮ್ಮ ಮನಸ್ಸು ಕಂಡಿತ ಬದಲಾಗುತ್ತದೆ. Anyway Deepak ಅಲ್ಲಿಯಾದರು ನಿನ್ನ ಆತ್ಮ ಶಾಂತಿಯಿಂದರಲಿ.

Regards,
Rajashekara Gouda Hotur
rjgouda@gmail.com

0 comments:

Post a Comment